ಟಾ_ರಸ ಯಾರು?

ಟಾ_ರಸ ಯಾರು ಎಂಬ ಪ್ರಶ್ನೆ ನಿಮ್ಮನ್ನೆಲ್ಲಾ ಕಾಡುತ್ತಿರಬಹುದು. ಟಾ_ರಸನ ವ್ಯಕ್ತಿತ್ವವನ್ನು ಹೇಗೆ ವರ್ಣಿಸುವುದು ಎಂದು ನನಗೂ ತಿಳಿಯುತ್ತಿಲ್ಲ. ಇವನೊಬ್ಬ ಸಂತ ಎಂದರೆ ಅದು ಸುಳ್ಳಾಗುತ್ತದೆ. ಹಾಗೆಂದು ಲೌಕಿಕ ಆದರೆ ಜ್ಞಾನಿ ಎಂದೆಲ್ಲಾ ಹೇಳಿದರೂ ಟಾ_ರಸನಿಗೆ ಅನ್ಯಾಯ ಮಾಡಿದಂತೆ ಆಗುತ್ತದೆ. ಅವನೊಬ್ಬ ಸಾಮಾನ್ಯನಾಗಿದ್ದ ಅಸಾಮಾನ್ಯ ವ್ಯಕ್ತಿ. ಈತ ಆಲ್_ಹಾಲ್ ಎಂಬ ಗುರುಗಳ ಶಿಷ್ಯ. ಈತನ ಕಾಲದ ಬಗ್ಗೆ ಅನೇಕ ಅನುಮಾನಗಳಿವೆ. ಇವನ ವಿಚಾರಗಳನ್ನು ಪರಿಗಣಿಸಿ ಕಾಲ ನಿರ್ಣಯ ಸಂಶೋಧನೆ ಇನ್ನೂ ನಡೆಯುತ್ತಿದೆ. ಇದು ಪೂರ್ಣಗೊಂಡ ತಕ್ಷಣ ಇಲ್ಲಿ ಪ್ರಕಟಿಸಲಾಗುವುದು.