Post

ಮೀನುಗಾರಿಕೆ

In ಟಾ_ರಸನ ಕಥೆಗಳು on September 22, 2006 by ಶೂನ್ಯ ಸಂಪಾದಕ

ಟಾ_ರಸ ಒಂದು ಮಧ್ಯಾಹ್ನ ಮೀನು ಹಿಡಿಯ ಬೇಕೆಂದು ತೀರ್ಮಾನಿಸಿ ಹೊರಟ. ಆಲ್‌_ಹಾಲ್‌ನ ಆಶ್ರಮದಲ್ಲಿದ್ದ ಮತ್ತೊಬ್ಬ ಮತ್ಸ್ಯ ಪ್ರೇಮಿ ಶಿಷ್ಯನೂ ಟಾ_ರಸನಿಗೆ ಜತೆಯಾದ. ನದಿ ದಂಡೆಯ ಮೇಲೆ ನಡೆಯುತ್ತಾ ಗಾಳ ಹಾಕಲು ಸೂಕ್ತ ಜಾಗ ಹುಡುಕುತ್ತಿರುವಾಗ ಟಾ_ರಸ ಜೊತೆಗಾರನನ್ನು ಕರೆದು `ನೋಡು ಈ ಮೀನುಗಳು ಎಷ್ಟು ಸಂತೋಷದಿಂದ ಈಜಾಡುತ್ತಿವೆ’ ಎಂದ.

ಟಾ_ರಸ ಮೀನು ಹಿಡಿಯುವನ್ನು ವಿರೋಧಿಸುತ್ತಿದ್ದಾನೆ ಎಂದು ಕೊಂಡ ಆತ `ನೀನು ಮೀನಲ್ಲದೇ ಇರುವುದರಿಂದ ಅವು ಸಂತೋಷದಿಂದ ಇವೆಯೋ, ದುಃಖದಲ್ಲಿವೆಯೋ ಎಂದು ನಿನಗೆ ಹೇಳಲು ಸಾಧ್ಯವಿಲ್ಲ’

ಟಾ_ರಸ ಹೇಳಿದ: `ನಾನಲ್ಲದೇ ಇರುವ ನಿನಗೆ ಮೀನುಗಳು ಸಂತೋಷವಾಗಿರುವುದು ನನಗೆ ಗೊತ್ತಿಲ್ಲ ಎಂದು ಹೇಳುವುದು ಹೇಗೆ ಸಾಧ್ಯ?’

Leave a Reply