October 10, 2006 – 4:48 pm
ಟಾ_ರಸ ರೂಪಕಗಳಲ್ಲಿ ಉತ್ತರ ಕೊಡುವುದರಲ್ಲಿ ಪ್ರವೀಣ. ಅವನಿಗೆ ಎದುರಾಗುವ ಎಲ್ಲಾ ಪ್ರಶ್ನೆಗಳನ್ನೂ ಅವು ವಿಶಿಷ್ಟವಾಗಿ ಗ್ರಹಿಸಿ ರೂಪಕಗಳಲ್ಲಿ ಉತ್ತರಿಸುತ್ತಿದ್ದುದರಿಂದ ಅನೇಕರಿಗೆ ಅವು ಅರ್ಥವಾಗುತ್ತಿರಲಿಲ್ಲ. ವರ್ತಮಾನದಲ್ಲೂ ಟಾ_ರಸನ ಕತೆಗಳನ್ನು ಕೇಳುವ, ಓದುವ ಅನೇಕರು ಕತೆಗಳು ಅರ್ಥವಾಗಲಿಲ್ಲ ಎಂದು ತಿಣುಕಾಡುತ್ತಾರೆ.
ಟಾ_ರಸನ ಗುರುಗಳಾದ ಆಲ್_ಹಾಲ್‌ರ ಶಿಷ್ಯರಿಗೂ ಇದೇ ಸಮಸ್ಯೆ ಕಾಡಿ ಅವರು ಗುರುಗಳ ಬಳಿಗೆ ಹೋದರು. `ತಾವೇನೋ ಟಾ_ರಸನ ಉತ್ತರಗಳು, ಸಾಮಿತಿಗಳು, ದೃಷ್ಟಾಂತಗಳನ್ನು ಹೊಗಳುತ್ತೀರಿ. ಆತ ಯಾವತ್ತೂ ಅವುಗಳ ಅರ್ಥವನ್ನು ವಿವರಿಸಲೇ ಇಲ್ಲ’ ಎಂದರು.
ಇದನ್ನು ಕೇಳಿ ನಕ್ಕ ಆಲ್_ಹಾಲ್ `ನಿಮಗೆ ತಿನ್ನಲೆಂದು [...]
October 9, 2006 – 10:56 am
ಟಾ_ರಸ ತಾಳೆ ಮರದ ಕೆಳಗೆ ಹೆಂಡದ ಬುರುಡೆಯೊಂದಿಗೆ ಧ್ಯಾನಕ್ಕೆ ಕುಳಿತ ಹೊತ್ತಿನಲ್ಲಿ ಅವನು ಭವಿಷ್ಯ ನುಡಿಯುತ್ತಾನೆ ಎಂಬ ನಂಬಿಕೆ ಅನೇಕರಿಗೆ ಇತ್ತು. ಧ್ಯಾನಸ್ಥ ಸ್ಥಿತಿಯಲ್ಲಿ ಟಾ_ರಸ ಹೇಳುತ್ತಿದ್ದ ಕೆಲವು ಮಾತುಗಳನ್ನು ಹಲವರು ಭವಿಷ್ಯದ ಸೂಚನೆಗಳಾಗಿ ಪರಿಗಣಿಸುತ್ತಿದ್ದರು. ಇದನ್ನು ಅರಿತವರು ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಟಾ_ರಸನನ್ನು ಧ್ಯಾನದ ಹೊತ್ತಿನಲ್ಲಿ ಭೇಟಿಯಾಗುತ್ತಿದ್ದರು.
ಹೀಗೆ ಬಂದ ಒಬ್ಬಾತ ತಾನೆಷ್ಟು ಶ್ರೀಮಂತ, ತಾನೆಷ್ಟು ತೀರ್ಥಕ್ಷೇತ್ರಗಳಿಗೆ ಶಾಂತಿ ಹುಡುಕಿಕೊಂಡು ಅಲೆದಿದ್ದೇನೆ ಎಂದೆಲ್ಲಾ ಹೇಳಿಕೊಂಡು `ಆದರೂ ನನಗೆ ಶಾಂತಿ ದೊರೆತಿಲ್ಲ. ಆದುದರಿಂದ ನಾನು ಹೇಗೆ ಬದುಕಬೇಕು. [...]
October 7, 2006 – 5:42 pm
ಟಾ_ರಸ ಧ್ಯಾನಸ್ಥನಾದಾಗ ದೇವರ ಜತೆ ಸಂಭಾಷಿಸುತ್ತಿರುತ್ತಾನೆ ಎಂಬುದು ಜನಪ್ರಿಯ ನಂಬಿಕೆ. ಕೆಲವರು ಹೇಳುವಂತೆ ಅವನು ಸ್ವರ್ಗ-ನರಕಗಳ ದರ್ಶನವನ್ನೂ ಮಾಡಿಕೊಂಡು ಹಿಂದಿರುಗುತ್ತಿದ್ದನಂತೆ. ಈ ಕಾರಣದಿಂದಾಗಿಯೇ ಧ್ಯಾನದಿಂದ ಎದ್ದ ತಕ್ಷಣ ಅವನಾಡುವ ಮಾತು ಈ ಲೋಕದ್ದಲ್ಲ ಎಂಬಂತೆ ಇರುತ್ತವೆ ಎಂದು ಕೆಲವರು ಹೇಳುತ್ತಾರೆ.
ಟಾ_ರಸ ಒಂದು ದಿನ ಎಂದಿನಂತೆ ಈಚಲ ಮರದ ಕೆಳಗೆ ಕುಳಿತಿದ್ದಾಗ ಒಬ್ಬಾತ ಬಂದು ಸ್ವರ್ಗ-ನರಕಗಳ ಕುರಿತು ಮಾತನಾಡಲು ತೊಡಗಿದ. ಟಾ_ರಸ `ಒಂದು ನಿಮಿಷ’ ಎಂದು ಹೇಳಿ ಸಮಾಧಿಗೆ ತೆರಳಿದ.
ಒಂದೆರಡು ನಿಮಿಷಗಳ ನಂತರ ಕಣ್ಣು ತೆರೆದಾಗ ಎದುರಿದ್ದಾತ `ನರಕದ [...]
October 7, 2006 – 8:59 am
ಟಾ_ರಸ ಒಂದು ದಿನ ತೊರೆಯ ದಂಡೆಯ ಮೇಲಿದ್ದ ತಾಳೆ ಮರದ ಕೆಳಗೆ ತನ್ನ ಹೆಂಡದ ಬುರುಡೆಯೊಂದಿಗೆ ಧ್ಯಾನಾಸಕ್ತನಾಗಿದ್ದ ಹೊತ್ತಿನಲ್ಲಿ ಆಗಂತುಕನೊಬ್ಬನ ಆಗಮನವಾಯಿತು. ಧ್ಯಾನಸ್ತ ಸ್ಥಿತಿಯಲ್ಲಿ ಹೆಂಡ ಸೇವನೆಯನ್ನು ಮುಂದುವರಿಸಿದ ಟಾ_ರಸ ಬಂದ ಆಗಂತುಕನ ಕಡೆ ಗಮನವನ್ನೇ ಹರಿಸಲಿಲ್ಲ.
ಆದರೆ ಆಗಂತುಕ ಬಿಡಲಿಲ್ಲ. ಟಾ_ರಸನ ಎದುರು ಕುಳಿತು ತಾನೊಬ್ಬ ಸಾಧಕ ಎಂದು ಪರಿಚಯಿಸಿಕೊಂಡು `ತಮಗೆ `ಟೌತ್ವ’ ಪ್ರಾಪ್ತಿಯಾಗಿರುವುದನ್ನು ಯಾರೋ ತಿಳಿಸಿದರು. ನಿಮ್ಮನ್ನು ಕಂಡು ನನ್ನ ಸಾಧನೆಗೆ ಮಾರ್ಗದರ್ಶನ ಪಡೆಯೋಣವೆಂದು ಬಂದಿದ್ದೇನೆ. ದಯವಿಟ್ಟು ನನ್ನ ಕೋರಿಕೆಯನ್ನು ಮನ್ನಿಸಬೇಕು’ ಎಂದು ವಿನಂತಿಸಿದ.
ಟಾ_ರಸ ಹೇಳಿದ: [...]
October 6, 2006 – 5:05 pm
ಇದು ಟಾ_ರಸ ಹೇಳಿದ ಆಲ್_ಹಾಲ್‌ನ ಕತೆ. ಒಂದು ದಿನ ಮಧ್ಯಾಹ್ನ ಟಾ_ರಸ ಊಟ ಮುಗಿಸಿ ಆಶ್ರಮದ ಮರದ ನೆರಳಲ್ಲಿ ಕುಳಿತಿದ್ದಾಗ ಅಲ್ಲಿಗೆ ಗುರು ಆಲ್_ಹಾಲ್‌ನ ಆಗಮನವಾಯಿತು. ಇಬ್ಬರೂ ಮೌನ ಸಂಭಾಷಣೆಯಲ್ಲಿ ತೊಡಗಿದ್ದಾಗ ಆಗಂತುಕನೊಬ್ಬ ಬಂದ. ಆತ ಹತ್ತಿರ ಬಂದು ಪರಿಚಯಿಸಿಕೊಂಡು ಆಲ್_ಹಾಲ್‌ನಲ್ಲಿ ಕೇಳಿದ. `ತಾವು ಮಹಾಜ್ಞಾನಿಗಳೆಂದು ತಿಳಿದಿದ್ದೇನೆ. ನನಗೇನಾದರೂ ಉಪದೇಶ ನೀಡಬಹುದೇ?’
ಆಲ್_ಹಾಲ್ ಮೌನ ಮುರಿದು ಮಾತನಾಡತೊಡಗಿದ: `ನಿನ್ನ ಊಟವಾಯಿತೇ?’
`ಆಯಿತು ಮಹಾಸ್ವಾಮಿ’
`ಸರಿ ಹಾಗಾದರೆ ಹೋಗಿ ನಿನ್ನ ತಟ್ಟೆ ತೊಳೆದಿಡು’
October 6, 2006 – 6:38 am
ಟಾ_ರಸ ಬಾಲಕನಾಗಿದ್ದಾಗ ನಡೆದ ಘಟನೆ ಇದು. ಒಂದು ದಿನ ಟಾ_ರಸ ಮತ್ತು ಅವನ ಗೆಳೆಯರು ಆಟವಾಡುತ್ತಿದ್ದಾಗ ಒಂದು ನಾಯಿ ಮರಿ ಬಂತು. ಈ ನಾಯಿ ಮರಿಯನ್ನು ಅಲ್ಲಿದ್ದ ಎಲ್ಲ ಬಾಲಕರೂ ಇಷ್ಟಪಟ್ಟರು.
ಪ್ರತಿಯೊಬ್ಬರೂ ನಾಯಿಯನ್ನು ಸಾಕಲು ತಾನೆಷ್ಟು ಸಮರ್ಥ ಎಂದು ವಾದಿಸ ತೊಡಗಿದ್ದರಿಂದ ಆಟ ಹೋಗಿ ಹೊಡೆದಾಟ ಆರಂಭವಾಯಿತು. ಆದರೂ ಸಮಸ್ಯೆ ಬಗೆ ಹರಿಯಲಿಲ್ಲ. ಕೊನೆಗೆ ಯಾರು ಅತ್ಯಂತ ದೊಡ್ಡ ಸುಳ್ಳು ಹೇಳುತ್ತಾನೋ ಅವನಿಗೆ ನಾಯಿ ಎಂದು ತೀರ್ಮಾನಿಸಲಾಯಿತು.
ನಾಯಿಯನ್ನು ಮಧ್ಯೆ ನಿಲ್ಲಿಸಿಕೊಂಡು ಒಬ್ಬೊಬ್ಬರೇ ಸುಳ್ಳುಗಳನ್ನು ಹೇಳಲು ತೊಡಗಿದರು. ಈ [...]
October 5, 2006 – 7:07 am
ಆಲ್_ಹಾಲ್ ಅವರ ಬಳಿಗೆ ಉಪದೇಶ ನಿರೀಕ್ಷಿಸಿ ಹಲವರು ಬರುತ್ತಿದ್ದರು. ಇವರಲ್ಲಿ ಎಲ್ಲ ವರ್ಗದ ಜನರೂ ಇದ್ದರು. ಒಮ್ಮೆ ದೂರದ ಓಯಸಿಸ್‌ನಿಂದ ಒಬ್ಬ ಶ್ರೀಮಂತ ಬಂದ. ಆಶ್ರಮದಲ್ಲಿ ಆತಿಥ್ಯ ಸ್ವೀಕರಿಸಿದ ನಂತರ ಆಲ್_ಹಾಲ್‌ರ ಬಳಿಗೆ ಹೋಗಿ ತನ್ನನ್ನು ಕಾಡುತ್ತಿರುವ ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟು ಅನುಗ್ರಹಿಸಬೇಕು ಎಂದು ಬೇಡಿಕೊಂಡ.
ಆಲ್_ಹಾಲ್ ಪ್ರಶ್ನೆ ಏನೆಂದು ಕೇಳಿದರು.
ಆತ ಹೇಳಿದ: `ನನ್ನಲ್ಲಿ ಸಾಕಷ್ಟು ಧನ, ಕನಕ, ಆಸ್ತಿಯಿದೆ. ಇದನ್ನು ಇತರರಿಗೆ ಕೊಟ್ಟು ಸಹಾಯ ಮಾಡುವುದು ಹೇಗೆ?
ಆಲ್_ಹಾಲ್ ಮರುಪ್ರಶ್ನೆ ಹಾಕಿದರು: `ಯಾವ ಇತರರು?’
October 4, 2006 – 3:00 pm
ಟಾ_ರಸ ನಾಡಿಶಾಸ್ತ್ರ, ಮರ್ಮಶಾಸ್ತ್ರಗಳನ್ನು ಅಭ್ಯಾಸ ಮಾಡುತ್ತಿದ್ದ ದಿನಗಳವು. ಒಂದು ದಿನ ಮಧ್ಯಾಹ್ನ ಬೀಡಾಡಿ ದನವೊಂದು ಗುರುಕುಲಕ್ಕೆ ಸೇರಿದ ಹೊಲಕ್ಕೆ ನುಗ್ಗಿ ಪೈರನ್ನು ಕಬಳಿಸುತ್ತಿತ್ತು. ಇದನ್ನು ಕಂಡ ಗುರು ಆಲ್_ಹಾಲ್‌ರ ಪತ್ನಿ ಟಾ_ರಸನನ್ನು ಕೂಗಿ ಕರೆದು ದನವನ್ನು ಓಡಿಸಲು ಹೇಳಿದರು. ಟಾ_ರಸ ಸಣ್ಣದೊಂದು ಕಡ್ಡಿ ತೆಗೆದುಕೊಂಡು ದನವನ್ನು ಓಡಿಸಲು ಪ್ರಯತ್ನಿಸಿದ. ಅದು ಟಾ_ರಸನ ಪೆಟ್ಟುಗಳಿಗೆ ಯಾವ ಗೌರವವನ್ನೂ ಕೊಡದೇ ಪೈರು ತಿನ್ನುವ ತನ್ನ ಕಾಯಕವನ್ನು ಮುಂದುವರಿಸಿತು. ಟಾ_ರಸ ಸಣ್ಣ ಕಡ್ಡಿ ಬಳಸಿ ಎಚ್ಚರಿಕೆಯಿಂದ ಮೆಲ್ಲನೆ ಆ ದನವನ್ನು ತಟ್ಟಿ [...]
October 4, 2006 – 8:25 am
ಆಲ್_ಹಾಲ್ ಅವರ ಶಿಷ್ಯರಲ್ಲಿ ಅನೇಕರಿಗೆ ಟಾ_ರಸನಿಗೆ `ಟೌತ್ವ’ ಪ್ರಾಪ್ತಿಯಾಗಿದೆ ಎಂಬುದನ್ನು ಒಪ್ಪಿಕೊಂಡಿರಲಿಲ್ಲ. ಇದು ಗುರು ಆಲ್_ಹಾಲ್‌ಗೂ ತಿಳಿದಿತ್ತು. ತನ್ನ ವಿದ್ಯಾರ್ಥಿಗಳ ತಪ್ಪು ತಿಳುವಳಿಕೆಯನ್ನು ನಿವಾರಿಸಲು ನಿರ್ಧರಿಸಿದ ಅವರು ಒಂದು ದಿನ ವಿದ್ಯಾರ್ಥಿಗಳೆಲ್ಲಾ ರಾತ್ರಿಯ ಊಟಕ್ಕೆ ಕುಳಿತಾಗ ತಮ್ಮ ತಟ್ಟೆ ಹಿಡಿದುಕೊಂಡು ಅಲ್ಲಿಗೆ ಹೋಗಿ ಎಲ್ಲರಂತೆ ಬಡಿಸಿಕೊಂಡರು.
October 3, 2006 – 10:52 am
ಆಲ್_ಹಾಲ್ ಅವರ ಆಶ್ರಮದಲ್ಲಿ ನಡೆದ ಘಟನೆ ಇದು. ಒಬ್ಬ ಪಶ್ಚಿಮ ನಾಡಿನ ವಿದ್ಯಾರ್ಥಿ ಬಂದು ಸೇರಿಕೊಂಡ. ಗುರುಗಳ ಬೋಧನೆಯನ್ನೆಲ್ಲಾ ಅಕ್ಷರಾರ್ಥದಲ್ಲಿ ಪಾಲಿಸುತ್ತಿದ್ದ ಈತ ಒಂದು ದಿನ ಭಿಕ್ಷೆಗೆ ಹೋಗಿದ್ದಾಗ ಯಾರೋ ಒಬ್ಬಾತ ಆಕ್ರಮಣ ನಡೆಸಿ ಭಿಕ್ಷಾ ಪಾತ್ರೆ ಕಿತ್ತುಕೊಳ್ಳಲು ಪ್ರಯತ್ನಿಸಿದ. ಆಲ್_ಹಾಲ್ ಅವರ ಶಿಷ್ಯನಾಗಿ ತಾನು ಹೇಗೆ ಪ್ರತಿಕ್ರಿಯಿಸಬೇಕು ಎಂದು ಯೋಚಿಸಿದ ಈತನಿಗೆ ನೆನಪಾಗಿದ್ದು `ಎಲ್ಲರೊಂದಿಗೂ ಸಹನೆಯಿಂದ ವರ್ತಿಸು’ ಎಂಬ ಗುರುವಚನ.
ದಾಳಿ ನಡೆಸಿ ಭಿಕ್ಷಾಪಾತ್ರೆಯನ್ನು ಕಿತ್ತೊಯ್ದರೂ ಸಹನೆಯಿಂದಿದ್ದ ಈತ ಆಶ್ರಮಕ್ಕೆ ಹಿಂದಿರುಗಿ ಗುರುಗಳಿಗೆ ಘಟನೆಯನ್ನು ವಿವರಿಸಿದ. ಆ [...]