ಶೂನ್ಯ ಸಂಪಾದಕ

ಭೂತ, ವರ್ತಮಾನ, ಭವಿಷ್ಯ

In ಟಾ_ರಸನ ಕಥೆಗಳು on October 4, 2006 at 8:25 am

ಆಲ್‌_ಹಾಲ್‌ ಅವರ ಶಿಷ್ಯರಲ್ಲಿ ಅನೇಕರಿಗೆ ಟಾ_ರಸನಿಗೆ `ಟೌತ್ವ’ ಪ್ರಾಪ್ತಿಯಾಗಿದೆ ಎಂಬುದನ್ನು ಒಪ್ಪಿಕೊಂಡಿರಲಿಲ್ಲ. ಇದು ಗುರು ಆಲ್‌_ಹಾಲ್‌ಗೂ ತಿಳಿದಿತ್ತು. ತನ್ನ ವಿದ್ಯಾರ್ಥಿಗಳ ತಪ್ಪು ತಿಳುವಳಿಕೆಯನ್ನು ನಿವಾರಿಸಲು ನಿರ್ಧರಿಸಿದ ಅವರು ಒಂದು ದಿನ ವಿದ್ಯಾರ್ಥಿಗಳೆಲ್ಲಾ ರಾತ್ರಿಯ ಊಟಕ್ಕೆ ಕುಳಿತಾಗ ತಮ್ಮ ತಟ್ಟೆ ಹಿಡಿದುಕೊಂಡು ಅಲ್ಲಿಗೆ ಹೋಗಿ ಎಲ್ಲರಂತೆ ಬಡಿಸಿಕೊಂಡರು.

ವಿದ್ಯಾರ್ಥಿಗಳೆಲ್ಲಾ ಗುರುಗಳು ಊಟ ಆರಂಭಿಸಲಿ ಎಂದು ಕಾಯುತ್ತಿದ್ದಾಗ ಗುರುಗಳು ಒಂದು ಪ್ರಶ್ನೆ ಮುಂದಿಟ್ಟು ಇದಕ್ಕೆ ಟಾ_ರಸನ ಹೊರತು ಪಡಿಸಿ ಉಳಿದ ಯಾರು ಬೇಕಾದರೂ ಉತ್ತರಿಸಿ ಊಟ ಆರಂಭಿಸಿ ಎಂದು ತಾವು ತಿನ್ನಲು ತೊಡಗಿದರು.

ಆ ಪ್ರಶ್ನೆ ಹೀಗಿತ್ತು `ನೀವು ಊಟ ಮಾಡುವುದು ಭೂತದಲ್ಲೋ, ವರ್ತಮಾನದಲ್ಲೋ ಭವಿಷ್ಯದಲ್ಲೋ?’

ಶಿಷ್ಯರೆಲ್ಲಾ ರಾತ್ರಿಯಿಡೀ ತಲೆಕೆಡಿಸಿಕೊಂಡು ಊಟದ ತಟ್ಟೆಗಳ ಮುಂದೆ ಕುಳಿತರು. ಮರುದಿನ ಮಧ್ಯಾಹ್ನವಾದರೂ ಯಾರಿಗೂ ಉತ್ತರ ಸಿಗಲಿಲ್ಲ. ಆಗ ಉತ್ತರ ಹೇಳಲು ಟಾ_ರಸನಿಗೆ ಅನುಮತಿ ದೊರೆಯಿತು.

ಟಾ_ರಸ ಹೇಳಿದ: `ನಾವು ಭೂತ, ವರ್ತಮಾನ, ಭವಿಷ್ಯಗಳಲ್ಲಿ ಊಟ ಮಾಡುವುದಿಲ್ಲ. ನಾವು ಊಟ ಮಾಡುವುದು ಬಾಯಿಯಲ್ಲಿ’

All comments are screened for appropriateness. Commenting is a privilege, not a right. Good comments will be cherished, bad comments will be deleted.