ಗುರು ಆಲ್_ಹಾಲ್ ಅವರ ಸಾಧನೆಯ ಬಗ್ಗೆ ಇದ್ದ ದಂತ ಕಥೆಗಳು ಅನೇಕ. ಅವರ ಬೋಧನಾ ಜ್ಞಾನವೂ ಅಷ್ಟೇ. ಇದನ್ನೆಲ್ಲಾ ಅವರು ಹೇಗೆ ಗಳಿಸಿದರು ಎಂಬುದಕ್ಕೆ ಸಂಬಂಧಿಸಿದಂತೆ ಇರುವ ಕಥೆ ಇಲ್ಲಿದೆ.
ಅದು ಗುರು ಆಲ್_ಹಾಲ್ ಜ್ಞಾನಾನ್ವೇಷಣೆಯಲ್ಲಿ ಸಂಚಾರ ನಡೆಸುತ್ತಿದ್ದ ಕಾಲಘಟ್ಟ. ಈ ಸಂಚಾರದ ವೇಳೆ ಅವರು ಭಾರತಕ್ಕೆ ಬಂದರು. ಆ ಕಾಲದಲ್ಲಿ ಭಾರತದಲ್ಲಿದ್ದ ಈಶಾಸತ್ವ ಎಂಬ ಮಹಾ ಜ್ಞಾನಿಯೊಬ್ಬಳ ಬಳಿಗೆ ಆಲ್_ಹಾಲ್ ಮಾರ್ಗದರ್ಶನ ಪಡೆಯಲು ಹೋದರು.
ಆಲ್_ಹಾಲ್ ಹೋದಾಗ ಈಶಾಸತ್ವ ಈಚಲ ಮರದ ಕೆಳಗೆ ಕುಳಿತು ಹರಟೆ ಹೊಡೆಯುತ್ತಿದ್ದಳು. ಆಲ್_ಹಾಲ್‌ರನ್ನು ನೋಡಿದ ಆಕೆ `ಕೇಳು’ ಎಂದಳು.
ಆಲ್_ಹಾಲ್ ಪ್ರಶ್ನಿಸಿದರು. `ಶಬ್ದಗಳನ್ನು ಬಳಸದೆ, ಶಬ್ದವನ್ನು ಬಳಸದೆಯೂ ಇರದೆ ಸತ್ಯವನ್ನು ಹೇಳುವುದು ಹೇಗೆ?’
ಈಶಾಸತ್ವ ಮೌನವಾಗಿದ್ದಳು.
ಆಲ್_ಹಾಲ್ `ಮಹಾತಾಯಿ ನೀನು ನೀಡಿದ ಅರಿವಿಗೆ ನಾನು ಕೃತಜ್ಞ’ ಎಂದು ಸಾಷ್ಟಾಂಗ ವಂದಿಸಿ ಅಲ್ಲಿಂದ ಹೊರಟರು.
ಕತೆಯನ್ನು ಅರ್ಥ ಮಾಡಿಕೊಳ್ಳದ ಯಾರೋ ಟಾ_ರಸನಲ್ಲಿ ಅರ್ಥವಿವರಿಸಬೇಕು ಎಂದಾಗ ಆತನೂ ಮೌನವಾಗಿದ್ದನಂತೆ.
Post a Comment