Post

ದೇವರ ಜತೆಗಿನ ಜಗಳ

In ಆಲ್_ಹಾಲ್ ನ ಕಥೆಗಳು on March 23, 2007 by ಶೂನ್ಯ ಸಂಪಾದಕ

ಲೋಕ ಸಂಚಾರಕ್ಕೆಂದು ಹೊರಟಿದ್ದ ಟಾ_ರಸ ಮತ್ತು ಗುರು ಆಲ್_ಹಾಲ್ ಆ ಮರಳುಗಾಡಿನಲ್ಲಿ ಅವರಿಗೆ ಪರಿಚಿತವಾಗಿದ್ದ ಓಯಸಿಸ್ ಬಳಿಗೆ ಬಂದಾಗ ಅದೂ ಬರಡಾಗಿತ್ತು. ಅಲ್ಲಿನ ಜನರೆಲ್ಲಾ ಕಂಗಾಲಾಗಿದ್ದರು.

ಗುರು ಆಲ್_ಹಾಲ್ ರನ್ನು ಕಂಡದ್ದೇ ತಡ ಅವರಲ್ಲೊಂದು ಆಶಾವಾದ ಮೂಡಿದು. ಗುರುಗಳು ಹೇಗಾದರೂ ಮಾಡಿ ಮಳೆ ಬರಿಸಬಹುದೆಂದು ಅವರಲ್ಲಿಗೆ ಬಂದು ಮಳೆ ಬರುವಂತೆ ದೇವರಲ್ಲಿ ಪ್ರಾರ್ಥಿಸಬೇಕೆಂದು ವಿನಂತಿಸಿದರು.

ಗುರು  ಆಲ್_ಹಾಲ್ ಹೇಳಿದರು ‘ನನಗೂ ದೇವರಿಗೂ ಜಗಳವಾಗಿದೆ. ಈಗ ನಾನೇನೂ ಕೇಳುವ ಸ್ಥಿತಿಯಲ್ಲಿ ಇಲ್ಲ’

ಓಯಸಿಸ್ ನ ಜನರು ಮಳೆ ಬರಿಸಲೇಬೇಕೆಂದು ಒತ್ತಾಯಿಸಿದರು. ಗುರು ಆಲ್_ಹಾಲ್  ಏನೋ ತೀರ್ಮಾನಿಸಿದವರಂತೆ ಹೆಗಲ ಮೇಲಿದ್ದ ಬಟ್ಟೆಯನ್ನು ತೆಗೆದು ಕಮಂಡಲದ ನೀರಿಗೆ ಅದ್ದಿ ಒದ್ದೆಯಾಗಿಸಿ ಹಿಂಡಿ ಹತ್ತಿರದಲ್ಲೇ ಇದ್ದ ಮುಳ್ಳುಕಂಟಿಯ ಮೇಲೆ ಒಣಗಿಸಲು ಹರಡಿದರು.

ಕೆಲವೇ ಕ್ಷಣದಲ್ಲಿ ಆಕಾಶದಲ್ಲಿ ಮೋಡಗಟ್ಟಿತು. ಜೋರಾಗಿ ಮಳೆ ಸುರಿಯಿತು.

5 Responses to “ದೇವರ ಜತೆಗಿನ ಜಗಳ”

  1. I really didnt understand this story ದೇವರ ಜತೆಗಿನ ಜಗಳ. Was it showing the magical powers of the guru or was it just a chronicle of the legend. Is there any philosophical interpretation for this story?

  2. Astroshiva,

    I think the story is simple enough to understand. Al_hal had a quarrel with god.
    What we normally do when we dislike someone?
    We like to trouble them.
    So, when Al tried to dry his clothes, god sent a shower of rain so that it won’t dry!!
    Al’s so cool!!

    Tina.

  3. ಇಂತ ಕತೆಗಳನ್ನು ತುಂಬಾ ವಿವರಿಸಬಾರದು ಎಂದು ಗೊತ್ತಿದ್ದೂ ಒಂದಿಷ್ಟು ತರಲೆ ಮಾಡುತ್ತಿದ್ದೇನೆ.
    ನನಗೆ ಈ ಕತೆ ತಾತ್ವಿಕತೆ ಮತ್ತು ಲೋಕದ ಜತೆಗಿನ ನಮ್ಮ ಸಂಬಂಧದ ನಡುವೆ ಏಳುವ ತಾಕಲಾಟದ ಬಗ್ಗೆ ಅನಿಸುತ್ತಿದೆ. ದೇವರ ಜತೆಗಿನ ಜಗಳ ನಮ್ಮ ತಾತ್ವಿಕತೆ/ಧೋರಣೆ/ನಿಲುವಿನಿಂದ ಹುಟ್ಟುವಂಥದು; ಆದರೆ ನಮ್ಮ ಸಮುದಾಯಕ್ಕೆ ಸಹಾಯ ಮಾಡಬೇಕಾದಾಗ ನಮ್ಮ ನಿಲುವಿನ ವಿರುದ್ಧ ಹೆಜ್ಜೆ ಇಡಬೇಕಾದ ಸಂದಿಗ್ಧ ಬರಬಹುದು.ಅಂಥ ತಾಕಲಾಟವನ್ನು ಪರಿಹರಿಸಿಕೊಳ್ಳುವಲ್ಲಿ ಅಲ್-ಹಾಲ್ ತೋರಿಸುವ ಚತುರತೆ, ಭಿನ್ನಾಭಿಪ್ರಾಯವನ್ನು ಎಲ್ಲರ ಒಳ್ಳೆಯದಕ್ಕೆ ಬಳಸುವ ಜಾಣ್ಮೆ ಎಷ್ಟು ಸುಂದರವಾಗಿ ಬಂದಿದೆ ಇಲ್ಲಿ!

  4. ಓಹ್ ನನ್ನ ಬರೆಹಕ್ಕೊಂದು ವಿಮರ್ಶೆಯೂ ಸಿಕ್ಕಿದೆ. ಶೂನ್ಯವನ್ನಷ್ಟೇ ಸಂಪಾದಿಸುವ ನನ್ನ ಛಲಕ್ಕೆ ಈ ಸವಾಲು ಎದುರಾಗಿದೆಯಲ್ಲಾ. ಮತ್ತಷ್ಟು ಕಥೆಗಳ ಮೂಲಕ ಶೂನ್ಯ ಸಂಪಾದನೆಯ ಪ್ರಯತ್ನ ಮುಂದುವರಿಸುವೆ. ಆಲ್_ಹಾಲ್ ಸಿಕ್ಕ ದಿನ ನನ್ನ ಸಮಸ್ಯೆಗಳೆಲ್ಲಾ ಹೇಗೂ ಪರಿಹಾರವಾಗುತ್ತವಲ್ಲ.

  5. namaste,
    blog ginda blog gige jigithiddaga nimma al_haal mathu t_rasa sikru. Thumba thumba chennagide nimma baraha. Ee katheyanthu adbhutha.

Leave a Reply