Author Archives: ಶೂನ್ಯ ಸಂಪಾದಕ


ಹೆಣದ ಮೆರವಣಿಗೆ

ಟಾ_ರಸ ಪ್ರವಾಸದಲ್ಲಿದ್ದ. ಹಾದಿಯಲ್ಲಿ ಸಿಕ್ಕ ಊರಿನ ಕಟ್ಟೆಯೊಂದರ ಮೇಲೆ ಕುಳಿತು ತನ್ನ ಹೆಂಡದ ಬುರುಡೆಯನ್ನು ಎದುರಿಟ್ಟುಕೊಂಡು ಧ್ಯಾನಾಸಕ್ತನಾದ. ಊರಿಗೆ ಯಾರೋ ಯೋಗಿಗಳು ಬಂದಿದ್ದಾರೆ ಅಂದುಕೊಂಡ ಊರಿನ ಪ್ರಮುಖನೊಬ್ಬ ತಮ್ಮನ್ನು ಬಹುಕಾಲದಿಂದ ಕಾಡುತ್ತಿದ್ದ ಪ್ರಶ್ನೆಯೊಂದಕ್ಕೆ ಉತ್ತರ ಕಂಡುಕೊಳ್ಳಲು ತೀರ್ಮಾನಿಸಿದ.
ಟಾ_ರಸ ಕುಳಿತಿದ್ದ ಕಟ್ಟೆಯಲ್ಲಿಗೆ ಬಂದು ಎದುರು ಕುಳಿತರು. ಟಾ_ರಸ ಕಣ್ಣು ತೆರೆದು ಒಂದು ಗುಟುಕು ಹೆಂಡವನ್ನು ಗಂಟಲೊಳಕ್ಕಿಳಿಸಿ ಧ್ಯಾನ ಸಮಾಧಿಯೊಳಕ್ಕೆ ಇಳಿಯುವ ಮುನ್ನ ಎದುರು ಕುಳಿತಿದ್ದ ವ್ಯಕ್ತಿಯ ಮುಖ ನೋಡಿ ನಕ್ಕ.
ಇದನ್ನು ಕಂಡ ಊರ ಮುಖಂಡನಿಗೆ ಉತ್ಸಾಹ  ಬಂತು. ‘ಸ್ವಾಮೀ [...]

ನೀರಿನಲ್ಲಿ ನಡೆಯುವ ವಿದ್ಯೆ

ಟಾ_ರಸ  ಒಂದು ದಿನ ಆಲ್‌_ಹಾಲ್‌ರ ಆಶ್ರಮದ ಬದಿಯಲ್ಲಿ ಹರಿಯುತ್ತಿದ್ದ ನದಿಯ ಆಚೆ ದಡದಲ್ಲಿ ತನ್ನೊಬ್ಬ ಗೆಳೆಯನೊಂದಿಗೆ ಧ್ಯಾನಕ್ಕೆ ಕುಳಿತ. ನೊರೆಯುಕ್ಕುವ ಹೆಂಡದ ಬುರುಡೆಯೊಂದಿಗೆ ಕುಳಿತಿದ್ದಾಗ ಪಶ್ಚಿಮ ದೇಶದ ಸಾಧಕನೊಬ್ಬ ಆಲ್‌_ಹಾಲ್‌ರ ಆಶ್ರಮದ ದಾರಿ ಕೇಳಿಕೊಂಡು ಬಂದ. ನದಿಯಾಚೆ ಇದ್ದ ಆಶ್ರಮವನ್ನು ತೋರಿಸಿ ಈ ಗೆಳೆಯರು ಮತ್ತೆ ಧ್ಯಾನಮಗ್ನರಾದರು.
ನದಿಯ ಅಗಲ ನೋಡಿ ಆ ಸಾಧಕ ಅಲ್ಲೇ ಕುಳಿತ. ಈ ಹೊತ್ತಿಗೆ ಏನೋ ನೆನಪಾದವನಂತೆ ಮೇಲೆದ್ದ ಟಾ_ರಸನ ಗೆಳೆಯ ನೀರಿನ ಮೇಲೆ ನಡೆಯುತ್ತ ಆಶ್ರಮದವರೆಗೆ ಹೋಗಿ ಒಂದು ಬುರುಡೆ ಹೆಂಡ [...]

ದೇವರ ಜತೆಗಿನ ಜಗಳ

ಲೋಕ ಸಂಚಾರಕ್ಕೆಂದು ಹೊರಟಿದ್ದ ಟಾ_ರಸ ಮತ್ತು ಗುರು ಆಲ್_ಹಾಲ್ ಆ ಮರಳುಗಾಡಿನಲ್ಲಿ ಅವರಿಗೆ ಪರಿಚಿತವಾಗಿದ್ದ ಓಯಸಿಸ್ ಬಳಿಗೆ ಬಂದಾಗ ಅದೂ ಬರಡಾಗಿತ್ತು. ಅಲ್ಲಿನ ಜನರೆಲ್ಲಾ ಕಂಗಾಲಾಗಿದ್ದರು.
ಗುರು ಆಲ್_ಹಾಲ್ ರನ್ನು ಕಂಡದ್ದೇ ತಡ ಅವರಲ್ಲೊಂದು ಆಶಾವಾದ ಮೂಡಿದು. ಗುರುಗಳು ಹೇಗಾದರೂ ಮಾಡಿ ಮಳೆ ಬರಿಸಬಹುದೆಂದು ಅವರಲ್ಲಿಗೆ ಬಂದು ಮಳೆ ಬರುವಂತೆ ದೇವರಲ್ಲಿ ಪ್ರಾರ್ಥಿಸಬೇಕೆಂದು ವಿನಂತಿಸಿದರು.
ಗುರು  ಆಲ್_ಹಾಲ್ ಹೇಳಿದರು ‘ನನಗೂ ದೇವರಿಗೂ ಜಗಳವಾಗಿದೆ. ಈಗ ನಾನೇನೂ ಕೇಳುವ ಸ್ಥಿತಿಯಲ್ಲಿ ಇಲ್ಲ’
ಓಯಸಿಸ್ ನ ಜನರು ಮಳೆ ಬರಿಸಲೇಬೇಕೆಂದು ಒತ್ತಾಯಿಸಿದರು. ಗುರು ಆಲ್_ಹಾಲ್  [...]

ವಿಕಾಸವಾದ

ಗುರು ಆಲ್_ಹಾಲ್ ಅವರ ಆಶ್ರಮದಲ್ಲಿ ಒಂದು ಬೆಕ್ಕು ಇತ್ತು. ಇದರೆದುರು ಏನನ್ನು ಕುಡಿಯಲು ಇಟ್ಟರೂ ಅದು ಪಾತ್ರೆಯನ್ನು ಉರುಳಿಸಿ ಪಾತ್ರೆಯೊಳಗಿರುವುದನ್ನು ನೆಲಕ್ಕೆ ಚೆಲ್ಲಿ ಆಮೇಲೆ ಅದನ್ನು ನೆಕ್ಕುತ್ತಿತ್ತು. ಇದನ್ನು ಕಂಡ ಶಿಷ್ಯರೆಲ್ಲರೂ ಅದನ್ನೊಂದು ದಡ್ಡ ಬೆಕ್ಕು ಎಂದು ತೀರ್ಮಾನಿಸಿಬಿಟ್ಟಿದ್ದರು.
ಒಂದು ದಿನ ಆಲ್_ಹಾಲ್ ಅವರು ವಿಕಾಸವಾದದ ಬಗ್ಗೆ ಹೇಳುತ್ತ ಆಶ್ರಮದಲ್ಲಿರುವ ಬೆಕ್ಕು ವಿಕಾಸವಾದ ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ಎಂದುಬಿಟ್ಟರು. ಶಿಷ್ಯರೆಲ್ಲಾ ಗಾಬರಿಯಾಗಿ ಈ ಬೆಕ್ಕು ವಿಕಾಸದ ಹಾದಿಯಲ್ಲಿ ಹಿಂದಕ್ಕೆ ಚಲಿಸಿರಬೇಕು ಎಂದು ಭಾವಿಸಿ [...]

ನರಕವಾಸಿಯ ಭಯ

ಟಾ_ರಸ ಧ್ಯಾನಸ್ಥನಾದಾಗ ದೇವರ ಜತೆ ಸಂಭಾಷಿಸುತ್ತಿರುತ್ತಾನೆ ಎಂಬುದು ಜನಪ್ರಿಯ ನಂಬಿಕೆ. ಕೆಲವರು ಹೇಳುವಂತೆ ಅವನು ಸ್ವರ್ಗ-ನರಕಗಳ ದರ್ಶನವನ್ನೂ ಮಾಡಿಕೊಂಡು ಹಿಂದಿರುಗುತ್ತಿದ್ದನಂತೆ.

ಈಶಾಸಸ್ವ ಬೋಧಿಸಿದ ಜ್ಞಾನ

ಅದು ಗುರು ಆಲ್‌_ಹಾಲ್‌ ಜ್ಞಾನಾನ್ವೇಷಣೆಯಲ್ಲಿ ಸಂಚಾರ ನಡೆಸುತ್ತಿದ್ದ ಕಾಲಘಟ್ಟ. ಈ ಸಂಚಾರದ ವೇಳೆ ಅವರು ಭಾರತಕ್ಕೆ ಬಂದರು. ಆ ಕಾಲದಲ್ಲಿ ಭಾರತದಲ್ಲಿದ್ದ ಈಶಾಸತ್ವ ಎಂಬ ಮಹಾ ಜ್ಞಾನಿಯೊಬ್ಬಳ ಬಳಿಗೆ ಆಲ್‌_ಹಾಲ್‌ ಮಾರ್ಗದರ್ಶನ ಪಡೆಯಲು ಹೋದರು.

ತುಂಬಿದ ಬುರುಡೆ

ಗುರು ಆಲ್‌_ಹಾಲ್‌ರ ಬಳಿ ಉಪದೇಶ ಮತ್ತು ಶಿಷ್ಯತ್ವ ಯಾಚಿಸಿ ಬರುವವರ ಸಂಖ್ಯೆ ಬಹಳ ದೊಡ್ಡದಿತ್ತು. ಈ ಸಂಖ್ಯೆಯಿಂದ ಅವರೇನೂ ವಿಚಲಿತರಾಗಿರಲಿಲ್ಲ. ನಿಜವಾದ ವಿದ್ಯಾರ್ಥಿಯನ್ನು ಆರಿಸುವ ಕಲೆ ಅವರಿಗೆ ಗೊತ್ತಿತ್ತು. ಅವರ ಆಯ್ಕೆಯ ವಿಧಾನಕ್ಕೆ ಸಂಬಂಧಿಸಿದ ಒಂದು ಕತೆ ಇಲ್ಲಿದೆ.
ಒಮ್ಮೆ ದೂರ ದೇಶದಿಂದ ಒಬ್ಬ ವಿದ್ವಾಂಸ ಆಲ್‌_ಹಾಲ್‌ ಆಶ್ರಮಕ್ಕೆ ಬಂದ. ಆತನ ಉದ್ದೇಶ ಸರಳವಾಗಿತ್ತು. ಆಲ್‌_ಹಾಲ್‌ ಅವರ ಶಿಷ್ಯ ವೃತ್ತಿ ಮಾಡಿ `ಟೌತ್ವ’ ಗಳಿಸುವುದು. ಆಲ್‌_ಹಾಲ್‌ರ ಬಗ್ಗೆ ಮೊದಲೇ ಅಧ್ಯಯನ ನಡೆಸಿ ಪರೀಕ್ಷೆಗೆ ಸಿದ್ಧನಾಗಿದ್ದ.
ಆಲ್‌_ಹಾಲ್‌ ಈತನನ್ನು ಕರೆದು [...]

ನೆನಪಿಡುವ ಯಂತ್ರ

ಗುರು ಆಲ್‌_ಹಾಲ್‌ ಅವರ ಆಶ್ರಮಕ್ಕೆ ಪಶ್ಚಿಮದ ಸಾಧಕನೊಬ್ಬನ ಆಗಮನವಾಯಿತು. ಇವನು ಈವರೆಗೂ ಬಂದಿದ್ದ ಪಶ್ಚಿಮದ ಸಾಧಕರೆಲ್ಲರಿಗಿಂತ ಭಿನ್ನನಾಗಿದ್ದ. ತನ್ನ ಸಾಧನೆಗಳ ಬಗ್ಗೆ ಆತ ಏನನ್ನೂ ಹೇಳಲಿಲ್ಲ. ಬದಲಿಗೆ ಆ ಸಾಧನೆಗಳು ಅಷ್ಟೇನೂ ಮುಖ್ಯವಲ್ಲ. ಅದಕ್ಕಾಗಿಯೇ ನಾನು ಆಲ್‌_ಹಾಲ್‌ ಅವರ ಮಾರ್ಗದರ್ಶನದಲ್ಲಿ ಕಲಿಯಲು ಬಂದಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದ.
ಬಂದ ದಿನ ಅವನಿಗೆ ಗುರುಗಳನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಮರು ದಿನ ಸಂಜೆಯ ಧ್ಯಾನದ ವೇಳೆ ಗುರುಗಳು ಅವನನ್ನು ಬರಲು ಹೇಳಿಕಳುಹಿಸಿದರು. ಆತ ಗುರುಗಳೆದುರು ನಿಂತು ತಾನು ವಿದ್ಯಾರ್ಥಿಯಾಗಿ ಬಂದಿದ್ದೇನೆ ಎಂದು ಪರಿಚಯಿಸಿಕೊಂಡ. [...]

ಬುದ್ಧಿವಂತನ ಪ್ರಶ್ನೆಗಳು

ಬಾಲಕ ಟಾ_ರಸನ ತುಂಟಾಟಗಳ ಕುರಿತು ಅನೇಕ ಕತೆಗಳಿವೆ. ಅದರಲ್ಲೊಂದು ಇಲ್ಲಿದೆ.
ಒಂದು ಮುಂಜಾನೆ ಮನೆಗೆ ತರಕಾರಿ ತರಲು ಟಾ_ರಸ ಮಾರುಕಟ್ಟೆಗೆ ಹೊರಟಿದ್ದ. ಎದುರಿನಿಂದ ಬಂದ `ಬುದ್ಧಿವಂತ’ ಹುಡುಗನೊಬ್ಬ `ಏನೋ  ಟಾ_ರಸ, ಎಲ್ಲಿಗೆ ಹೋಗುತ್ತಿದ್ದೀಯಾ’ ಎಂದು ಕೇಳಿದ. ಟಾ_ರಸ  ಇದಕ್ಕೆ `ನನ್ನ ಕಾಲು ಎಲ್ಲಿಗೆ ಕರೆದೊಯ್ಯುತ್ತದೋ ಅಲ್ಲಿಗೆ ಹೋಗುತ್ತಿದ್ದೇನೆ’ ಎಂದ.
`ಬುದ್ಧಿವಂತ’ನಿಗೆ ಏನು ಹೇಳಬೇಕೆಂದು ಅರ್ಥವಾಗದೆ ಸುಮ್ಮನಾದ. ಅಷ್ಟಕ್ಕೇ ಬಿಡದೆ ತುಂಬಾ ಯೋಚಿಸಿ ಮುಂದಿನ ಬಾರಿ ಸಿಕ್ಕಾಗ ಟಾ_ರಸ ಹೀಗೆಯೇ ಉತ್ತರಿಸಿದರೆ `ನಿನಗೆ ಕಾಲೇ ಇರಲಿಲ್ಲವಾದರೆ ಎಲ್ಲಿಗೆ ಹೋಗುತ್ತಿದ್ದೆ ?’ ಎಂದು [...]

ಹಗಲಿನಲ್ಲಿ ನಕ್ಷತ್ರ ಎಣಿಸುವ ವಿಧಾನ

ಟಾ_ರಸ ಚಿಕ್ಕವನಿರುವಾಗ ನಡೆದ ಘಟನೆ ಇದು. ಒಂದು ಅಮವಾಸ್ಯೆಯ ರಾತ್ರಿ ಟಾ_ರಸ ಅಂಗಳದಲ್ಲಿ ಅಂಗಾತ ಮಲಗಿ ಏನನ್ನೋ ಎಣಿಸುತ್ತಿದ್ದ. ಇದನ್ನು ಕಂಡ ಟಾ_ರಸ ತಾಯಿ `ಏನು ಮಾಡುತ್ತಿದ್ದೀಯಾ ಮಗು?’ ಎಂದು ಕೇಳಿದಳು. ಟಾ_ರಸ  ಉತ್ತರಿಸಿದ `ನಾನು ನಕ್ಷತ್ರಗಳನ್ನು ಎಣಿಸುತ್ತಿದ್ದೇನೆ’.
ಮಗನ ಉತ್ತರ ಕೇಳಿದ ತಾಯಿಗೆ ಭಾರತ ದೇಶದ ರಾಜನೊಬ್ಬ ತನ್ನ ವಿದೂಷಕನಲ್ಲಿ ನಕ್ಷತ್ರಗಳ ಸಂಖ್ಯೆ ಎಷ್ಟು ಕೇಳಿದಾಗ ಆತ ಒಂದು ಚೀಲದ ತುಂಬ ಮರಳನ್ನು ಕೊಂಡೊಯ್ದು ಕೊಟ್ಟು ಇಲ್ಲಿರುವ ಮರಳಿನ ಕಣದಷ್ಟು ನಕ್ಷತ್ರಗಳಿವೆ ಎಂದಿದ್ದ ಕತೆ ನೆನಪಾಯಿತು. ಇದನ್ನು [...]